Monday, 2 January 2012

" ಗೀತ ಸಾಹಿತ್ಯ " ಅಂದು - ಇಂದು.

* ಶಿವಪ್ಪಾ ಕಾಯೋ ತಂದೆ
* ಮೆಲ್ಲುಸಿರೇ ಸವಿಗಾನ, ಎದೆ ಜಲ್ಲೇನೆ ಹೂವಿನ ಬಾಣ.. ಪ್ರಿಯ...
* ಸ್ವಾಭಿಮಾನದ ನಲ್ಲೆ.....
* ಸಿಡ್ಯಾಕೋ ಸಿಡ್ಯಾಕೋ ನನ್ನ ಜಾಣ, ಆಯ್ತು ನಿನ ಮೇಲೆ ನನ್ನ ಪ್ರಾಣ
* ಅಮರ ಮಧು ರ ಪ್ರೇಮಾ...ಆ.. ಆ...
*  ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ....
*  ಒಲವೇ ಜೀವನ ಸಾಕ್ಷಾತ್ಕಾರ,  ಒಲವೇ ಮರೆಯದ ಮಮಕಾರ..
*  ಆಡಿಸಿ ನೋಡು ಬೀಳಿಸಿನೋಡು....
*  ದೂರದಿಂದ ಬಂದಂತ ಸುಂದರಾಂಗ ಜಾಣ
*  ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲೀ ಗೆಜ್ಜೆ ಪೂಜೆಯ....
*  ಬೆಳ್ಳಿ ಮೋಡದ ಆಚೆಯಿಂದ  ಮೂಡಿ ಬಂದ ಮಿನುಗುತಾರೆ..
*  ಕೆಂಪು ರೋಜಾ ಮೊಗದವಳೇ ಕೆಂಡ ಸಂಪಿಗೆ ಮುಡಿದವಳೇ...
*  ಬಾರೇ ಬಾರೇ ಚಂದದ ಚೆಲುವಿನ ತಾರೇ...

*  ಉತ್ತರ ದ್ರುವದಿಂದ್ ದಕ್ಷಿಣ ದ್ರುವಕ್ಕೂ..
* ಬಾನಿಗೊಂದು ಎಲ್ಲೇ ಎಲ್ಲಿದೆ. ನಿನ್ನಾಸೆಗೆಲ್ಲಿ ಕೊನೆ ಇದೆ..
*  ವಸಂತ ಬರೆದನೂ  ಓಲವಿನ  ಓಲೆ  ಚಿಗುರೆಲೆ ಎಲೆ ಎಲೆ ಮೇಲೆ
* ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ
* ನಮ್ಮೂರ ಮಂದಾರ ಹೂವೇ, ನನ್ನುಲುಮೆ ಬಾಂದಳನ ಚೆಲುವೆ....
* ಯಾವ ಕವಿಯೂ ಬರೆಯಲಾರ...
* ಹಾಡೊಂದ ಹಾಡುವೆ ನೀ ಕೇಳು ಮಗುವೆ ಬರಿದಾದ ಮನೆಗೆ ನೀನೆಂದು ಬರುವೆ..
* ಕಣ್ಣೀರ ಧಾರೆ ಇದೇಕೇ ಇದೇಕೆ ...
* ಮುಗಿಲ ಮಲ್ಲಿಗೆಯೋ , ಗಗನದಾ ತಾರೆಯೋ...
* ನೋಟದಾಗಿ ನಗೆಯಾ ಮೀಟಿ....................
* ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ. ಗದ್ದಾಗಿ ಕುಕ್ಕಿತಲ್ಲೋ....
* ಮಸಣದ ಹೂವೆಂದು ನೀನೇಕೆ ಕೊರಗುವೆ..
*  ನೂರೊಂದು ನೆನೆಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ....
ಇಂತಹ ಸಾವಿರಾರು ಅರ್ಥ ಗರ್ಭಿತವಾದ ಹಾಡುಗಳು, ಇಂದಿಗೂ ಮನಸ್ಸಿಗೆ ಬೇಸರವಾದಾಗ ಕೇಳುತ್ತಿದ್ದರೆ ಎಂತಹ   ಆನಂದ ಕೊಡುತ್ತವೆ.
ಘಂಟಸಾಲ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್. ಆರ್. ಈಶ್ವರಿ, ಬಾಲ ಸುಬ್ರಹ್ಮಣ್ಯ, ಪಿ. ಸುಶೀಲ, ವಾಣಿಜಯರಾಂ ಇವರಂತಹ ಗಾಯಕರು ತಮ್ಮ ಕಂಠ ಸಿರಿಯಿಂದ  ಇಂದಿಗೂ ನಮ್ಮ ಮನಸ್ಸಿನೊಳಗೆ ಹೊಕ್ಕಿ ಕುಳಿತ್ತಿದ್ದಾರೆ. ವಿಜಯ ನಾರಸಿಂಹ, ಚಿ|| ಉದಯಶಂಕರ್ ರಂತಹ ಗೀತ ರಚನೆಗಾರರು ತಮ್ಮ ಗೀತೆ ರಚನೆಗಳಲ್ಲಿ ಜೀವನದ ಹತ್ತಿರ ವಿಷಯಗಳನ್ನು ಮನಮುಟ್ಟುವಂತೆ ಹಾಡಿನ ಮೂಲಕ ಬರೆದು ಚಲನ ಚಿತ್ರಗಳ ಮೂಲಕ ನಮಗೆ ಶಾಶ್ವತವಾಗಿ ಆದರ್ಶ ಪುರುಷರಾಗಿದ್ದಾರೆ.
ಅಂತಹ ಅರ್ಥ ಗರ್ಭಿತ ಹಾಡುಗಳು, ಮಾನವನ  ಕದಡಿದ ಮನಸ್ಸುಗಳನ್ನು ನಿರ್ಮಲಗೊಳಿಸುವ ತಾಕತ್ತು ಆ ಗೀತೆಗಳಿವೆ.
ಇವತ್ತೇನಾಗಿದೆ.
ನಾವು ಎಲ್ಲಾ ರಂಗಗಳಲ್ಲೂ ಮುಂದಿದ್ದೇವೆ. ಸಾಧಿಸಿದ್ದೇವೆ ಎಂದು ಅಬ್ಬರಿಸಿ ಬೊಬ್ಬಿರಿಯುವ ನಾವು ಸಾಧಿಸುತ್ತಿರುವುದಾದರೂ ಏನನ್ನು. "ಚಿತ್ರರಂಗ"ದಲ್ಲಿ ಯಾವ ಸಾಧನೆ ಮಾಡುತ್ತಿದ್ದೇವೆ.
ಅಂದಿನ ಗೀತೆ ರಚನೆಗಳ ಮಾದರಿಯಲ್ಲಿ ಒಂದೇ ಒಂದು ಗೀತೆ ಸಾಹಿತ್ಯ ರಚಿಸಲು ಆಗುತ್ತಿಲ್ಲ.
ಈಗಿನ ಚಿತ್ರ ಗೀತೆಗಳು ಬೆಳಿಗ್ಗೆ ಕೇಳಿದರೆ ಸಂಜೆ ಮರೆತು ಹೋಗಿರುತ್ತದೆ.
"ಅಮ್ಮಾ ಲೂಸ್ಸಾ.......
"ಹಳೇ ಪಾತ್ರೆ ಹಳೇ ಕಬ್ಣ........
ಇಂತಹ ಹಾಡುಗಳು ಇದ್ಯಾವ ಸಾಹಿತ್ಯವೋ ದೇವರೇ ಬಲ್ಲ
ಮುಂಗಾರಿನ ಮಳೆ, ದುನಿಯಾ, ಮಿಲನ ದಂತಹ ಚಿತ್ರಗಳಲ್ಲಿ ಜಯಂತ್ ಕಾಯ್ಕಿಣಿಯವರು ಬರೆಯುವ ಹತ್ತಾರು ಹಾಡುಗಳು ಕೇಳುವಂತಿದ್ದರೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಂತಿಲ್ಲ.
 ಇದೇ ಚಿತ್ರರಂಗ, ಅದೇ ತಂತ್ರಜ್ಞರು, ಉನ್ನತ ಮಟ್ಟದ ತಂತ್ರಜ್ಞಾನ ಮುಂದಿದ್ದರು
ಯಾಕೆ ವಿಫಲವಾಗುತ್ತಿವೆ.
ಹಿಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಬಹುದಿತ್ತು.
ಯಾಕೆ ಆಗುತ್ತಿಲ್ಲ.



No comments:

Post a Comment